• ಜೂನ್ 6, 2020
  • rellowplaques
  • Ecology

ಬೆಂಗಳೂರಿನಿಂದ 28 ಕಿ.ಮೀ. ದೂರದಲ್ಲಿರುವ ದೊಡ್ಡ ಆಲದ ಮರವು 3 ಎಕರೆ ವಿಸ್ತೀರ್ಣದಲ್ಲಿದೆ. ಸುಮಾರು ೪೦೦ ವರ್ಷಗಳ ಇತಿಹಾಸ ಹೊಂದಿರುವ ಈ ಮರವು ಭಾರತದ ಪ್ರಾಚೀನ ಆಲದ ಮರಗಳ ಸಾಲಿನಲ್ಲಿ ನಾಲ್ಕನೇ ಸ್ಥಾನ ಗಿಟ್ಟಿಸಿದೆ. ೧೦೦೦ಕ್ಕೂ ಹೆಚ್ಚು ಬೇರುಗಳನ್ನು ಹೊಂದಿರುವ, ಪ್ರವಾಸಿಗರನ್ನು ಅಚ್ಚರಿಗೊಡ್ಡುತ್ತಾ ಬಂದಿರುವ ಈ ಆಲದ ಮರಕ್ಕೆ ಒಂದು ಐತಿಹ್ಯ ಇದೆ. ಈಗಿರುವ ಆಲದಮರದ ಜಾಗದಲ್ಲಿ ಧಾನ್ಯದ ಕಣ ಮಾಡುತ್ತಿದ್ದರಂತೆ, ಕಣವನ್ನು ಹದಗೊಳಿಸಿ ಕಣದ ಮೇಟಿಯಾಗಿ ಆಲದ ಕಡ್ಡಿಯನ್ನು ನೆಟ್ಟಿದ್ದರು. ಮೇಟಿಕಡ್ಡಿಯು ಒಂದೇ ರಾತ್ರಿಯಲ್ಲಿ ಆಶ್ಚರ್ಯಕರವಾಗಿ ಚಿಗುರಿತು, ಇದನ್ನು ನೋಡಿದ ಜಮೀನಿನ ಮಾಲೀಕ ಶಾಸ್ತ್ರ ಕೇಳಿದಾಗ ಅದು ದೇವರ ಮಹಿಮೆ ಎಂದು ತಿಳಿಯಲ್ಪಟ್ಟಿತು. ಮಾಲೀಕನಿಗೆ ಕನಸಿನಲ್ಲಿ ಬಂದ ಮುನೇಶ್ವರ ದೇವರು, ಆಲದ ಸಸಿಯ ಬಗ್ಗೆ ತಿಳಿಸುತ್ತ ಆ ಜಾಗದಲ್ಲಿ ತಾನು ನೆಲೆಸುವುದಾಗಿ ತಿಳಿಸಿದನು ಎಂದು ಇಲ್ಲಿನ ಜನ ನಂಬಿದ್ದಾರೆ. ಆಗಿನಿಂದ ದೇವರ ಆಜ್ಞೆಯಂತೆ ಅಲ್ಲೇ ಮುನೇಶ್ವರ ದೇವರ, ಕಲ್ಲಿನ ಬೆನಕ ಪೂಜೆ ಮಾಡುತ್ತ ಮರವನ್ನು ಕಡಿಯದೆ ಸ್ಥಳೀಯರು ಸಂರಕ್ಷಿಸಿದರು. ಅದೇ ಮರ ಇಂದು ಬೃಹದಾಕಾರವಾಗಿ ಬೆಳೆದು ಬೆಂಗಳೂರಿನ ಅದ್ಭುತದಲ್ಲೊಂದಾಗಿದೆ.


Total Page Visits: 926 - Today Page Visits: 1

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ