• ಜೂನ್ 6, 2020
  • rellowplaques
  • Ecology

ಸವಣೂರು ಪಟ್ಟಣದ ದೊಡ್ಡ ಹುಣಸೆ ಮಠದಲ್ಲಿ 3 ಬೃಹದಾಕಾರದ ಹುಣಸೆ ಮರಗಳಿವೆ. ಈ ವೃಕ್ಷಗಳನ್ನು ಪೂಜಿಸಿ ಆರಾಧಿಸುವುದನ್ನು ನಾವು ಇಲ್ಲಿ ಕಾಣಬಹುದು. ಈ ಮರಗಳಿಂದ ಬರುವ ಹುಣಸೆ ಹಣ್ಣನ್ನು 10-15 ವರ್ಷಗಳ ಕಾಲ ಹಾಗೆ ಇಡಬಹುದು! ಈ ಹಣ್ಣನ್ನು ಪ್ರತಿದಿನ ತಿಂದರೆ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಈ ಮರದ ಎಲೆ,ಬೇರು,ತೊಗಟೆ ಸಂಪೂರ್ಣ ಔಷಧಯುಕ್ತವಾಗಿವೆ. ಕೆಮ್ಮು, ದಮ್ಮು, ರಕ್ತದೊತ್ತಡ, ಸಕ್ಕರೆ ಖಾಯಿಲೆಗೆ ಈ ಮರದ ಹುಣಸೆ ಹಣ್ಣಿನ ಬೀಜವನ್ನು ಉಪಯೋಗಿಸುತ್ತಾರೆ. ವೃಕ್ಷದ ಅಳತೆಗಳು.
ಮೊದಲನೆ ಮರದ ಸುತ್ತಳತೆ 18.8 ಮೀಟರ್, ಎತ್ತರ 17 ಮೀಟರ್.
ಎರಡನೇ ಮರದ ಸುತ್ತಳತೆ 16.7 ಮೀಟರ್, ಎತ್ತರ 18.7 ಮೀಟರ್.
ಮೂರನೇ ಮರದ ಸುತ್ತಳತೆ 17.50 ಮೀಟರ್, ಎತ್ತರ 12.63 ಮೀಟರ್.

ಬಾಂಬುಕೇಶಯ ಎಂಬ ಕುಟುಂಬ ವರ್ಗಕ್ಕೆ ಸೇರಿದ ಈ ವೃಕ್ಷ ಆಫ್ರಿಕಾ ಖಂಡದಲ್ಲಿ ಅದರಲ್ಲೂ ಕೆಲವು ಸ್ಥಳಗಳಲ್ಲಿ ಮಾತ್ರವೆ ಕಂಡುಬರುತ್ತವೆ. ಇಂತಹ ಅಪರೂಪದ ಮರಗಳು ನಮ್ಮ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ಕಾಣಸಿಗುವುದು ಆಶ್ಚರ್ಯವೇ ಸರಿ.

Total Page Visits: 478 - Today Page Visits: 1

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ