ಬೆಂಗಳೂರಿನ ಅತ್ಯಂತ ಪ್ರಾಚೀನ ಗರಡಿ ಮನೆ ಎಂದೇ ಅರಳೇಪೇಟೆಯ ಗುರುಮಾದಂತ್ ರವರ ದೊಡ್ಡ ಗರಡಿಮನೆ ಪ್ರಸಿದ್ಧವಾಗಿದೆ.

1680ರ ದಶಕದಲ್ಲಿ ಈ ಗರಡಿಮನೆಯನ್ನು ಗುರು ಗೋಪಾಲ್ ಮಾದಂತ್ ಎನ್ನುವವರು ಆರಂಭಿಸಿದರು ಎಂದು ಹೇಳಲಾಗುತ್ತದೆ. ಶ್ರೀ ಗುರು ಮಾದಂತ್ ರವರು ಮೂಲತಃ ಖಾನ್ ಪುರದವರು. ಬೆಂಗಳೂರಿಗೆ ಬಂದು ನೆಲೆಸಿ, ಅರಳೇಪೇಟೆಯ ಈ ಸ್ಥಳದಲ್ಲಿ ಯೋಗ, ಧ್ಯಾನಗಳ ಜೊತೆಗೆ ಕುಸ್ತಿಯ ಅಭ್ಯಾಸವನ್ನೂ ಪ್ರಾರಂಭಿಸಿದ್ದರಂತೆ. ಒಂದು ಮೂಲದ ಪ್ರಕಾರ ಹೈದರ್ ಅಲಿ ಕೂಡ ಇಲ್ಲಿ ತನ್ನ ಕುಸ್ತಿಯ ತರಬೇತಿಯನ್ನು ಪಡೆದಿದ್ದ ಎಂದು ಹೇಳಲಾಗುತ್ತದೆ. ಮೈಸೂರು ಸಂಸ್ಥಾನದ ಅಡಿಯಲ್ಲಿ ಗೋಪಾಲ ರಾಜ ಅರಸ್ ಅವರು ಬೆಂಗಳೂರಿಗೆ ನೇಮಕಗೊಂಡಾಗ ಅವರ ಸೇನೆಯಲ್ಲಿದ್ದ ಯುವಕ ಹೈದರ್ ಅಲಿ, ಅರಳೇಪೇಟೆಯ ಈ ಗರಡಿಮನೆಯಲ್ಲಿಯೇ ತನ್ನ ಮಾಂಸಖಂಡಗಳನ್ನು ಬಲಪಡಿಸಿಕೊಳ್ಳುತ್ತಿದ್ದನಂತೆ!

ನಂತರದ ದಿನಗಳಲ್ಲಿ ಈ ಗರಡಿ ಮನೆಯನ್ನು ಎರಡು ಬಾರಿ ನವೀಕರಿಸಲಾಯ್ತು. ಶ್ರೀ ಗುರುಮಾದಂತ್ ರು ಇದನ್ನು ಅದೇ ಜಾಗದ ಹತ್ತು ಜನ ಯುವಕರಿಗೆ ಬಿಟ್ಟುಕೊಟ್ಟರು. ಗರಡಿ ಮನೆ ಹಾಗೆಯೇ ಮುಂದುವರೆಯಿತು. 1927ರಲ್ಲಿ ಇದನ್ನು ನವೀಕರಿಸಲಾಯ್ತು.

ಇದೇ ಗರಡಿಯಲ್ಲಿ ಪೈಲ್ವಾನ್ ಗಾಲದ ಹನುಮಂತರಾಯಪ್ಪ, ಪೈಲ್ವಾನ್ ಖಡಕ್ ಸಿಂಗ್ ಮುಂತಾದ ಪ್ರಖ್ಯಾತರು ತಯಾರಾಗಿದ್ದು. ಈ ಗರಡಿಮನೆ ಇಂದಿಗೂ ಅರಳೇಪೇಟೆಯ ಅದೇ ಜಾಗದಲ್ಲಿ ಇರುವುದನ್ನು ಕಾಣಬಹುದು.


Total Page Visits: 4169 - Today Page Visits: 6

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ