• ಜನವರಿ 8, 2021
  • rellowplaques
  • History

ರಾಮಾಯಣ ಮಹಾಕಾವ್ಯದ ಅನರ್ಘ್ಯ ರತ್ನ ಹನುಮಂತನ ಜನ್ಮಸ್ಥಾನವೆಂದು ನಂಬಲಾದ ಅಂಜನಾದ್ರಿ ಬೆಟ್ಟ, ಕೊಪ್ಪಳ ಜಿಲ್ಲೆಯಲ್ಲಿದೆ. ರಾಮಾಯಣದಲ್ಲಿ ಇದನ್ನು ಕಿಷ್ಕಿಂಧಾ ಎಂದು ಕರೆದಿದ್ದಾರೆ. ರಾಮ ಲಕ್ಷ್ಮಣರು ಸೀತಾನ್ವೇಷಣೆಗಾಗಿ ಹೊರಟು ದಕ್ಷಿಣದ ಕಡೆ ಬಂದಾಗ ಶಬರಿ ಆಶ್ರಮದ ನಂತರ ಹನುಮಂತನನ್ನು ಭೇಟಿ ಮಾಡಿದ ಜಾಗವಿದು. ವಾನರ ರಾಜ ವಾಲಿ ವಧೆ ಮಾಡಿ ಸುಗ್ರೀವನ ಸ್ನೇಹದಿಂದ ಲಂಕೆಯನ್ನು ಜಯಿಸಲು ಕಾರಣನಾದ ಹನುಮಂತನ ಜಾಗೃತ ಸ್ಥಳವಿದು. ಈ ಸ್ಥಳವನ್ನು ಋಷ್ಯಮುಖವೆಂತಲೂ ಕರೆದಿದ್ದಾರೆ.

ಬೆಟ್ಟದ ತುದಿಯಲ್ಲಿ ಆಂಜನೇಯನ ಸುಂದರವಾದ ದೇವಾಲಯವಿದ್ದು, ಉತ್ತರಭಾರತದ ಅರ್ಚಕರು ಇಲ್ಲಿ ಪೂಜಾ ಕೈಂಕರ್ಯ ನಡೆಸುತ್ತಾರೆ. 570 ಮೆಟ್ಟಿಲುಗಳನ್ನು ಹತ್ತಿ ಹನುಮಂತನ ದರ್ಶನ ಮಾಡುವುದೇ ಒಂದು ಅದ್ಭುತ ಅನುಭವ. ಇತ್ತೀಚಿಗೆ ಕೊಪ್ಪಳ ಜಿಲ್ಲಾಡಳಿತ ಈ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಯ ಅಧೀನಕ್ಕೆ ತೆಗೆದುಕೊಂಡಿದ್ದು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಪ್ರವಾಸಿಗರು ಬಂದು ಹೋಗಲು ಕೊಪ್ಪಳ, ಗಂಗಾವತಿಯಿಂದ ಉತ್ತಮ ರಸ್ತೆ ಸಂಪರ್ಕವಿದೆ, ಮುನಿರಾಬಾದ್ ರೈಲು ನಿಲ್ದಾಣದಿಂದ ಆಟೋ ಮತ್ತು ಬಾಡಿಗೆ ವಾಹನಗಳು ಲಭ್ಯವಿದೆ.

Total Page Visits: 1505 - Today Page Visits: 4

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ